top of page

ದನದ ಮಾಂಸದ ಬಗ್ಗೆ ಕೆಲವು ಮಾಹಿತಿ

  • indianutritionz
  • Feb 16, 2024
  • 3 min read






ಭಾರತದಲ್ಲಿ ದನದ ಮಾಂಸವನ್ನು ಯಾರು ತಿನ್ನುತ್ತಾರೆ?

ಭಾರತದಲ್ಲಿ ಶೇಕಡಾ ಹದಿನೈರಷ್ಟು ಜನರು (180 ಮಿಲಿಯನ್ ) ದನದ ಮಾಂಸವನ್ನು ತಿನ್ನುತ್ತಾರೆ. ದಲಿತರು, ಮುಸ್ಲಿಮರು, ಆದಿವಾಸಿಗಳು, ಕ್ರಿಶ್ಚಿಯನ್ನರು ಮತ್ತು ಹಿಂದುಳಿದ ಸಮುದಾಯಗಳು ದನದ ಮಾಂಸವನ್ನು ತಿನ್ನುವ ವರ್ಗಕ್ಕೆ ಸೇರಿದ್ದಾರೆ. ದನದ ಮಾಂಸ ಸೇವಿಸುವ ಕೆಲವರು ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಈ ಆಹಾರದ ಕುರಿತಂತೆ ಇರುವ ಸಾಮಾಜಿಕ ಮೌಢ್ಯ, ಶ್ರೇಷ್ಟತೆಯ ವ್ಯಸನ, ತಾರತಮ್ಯತೆ ಇದಕ್ಕೆ ಮುಖ್ಯ ಕಾರಣ.


ಭಾರತದ ಹಳ್ಳಿಗಳಲ್ಲಿ ಅನೇಕ ಕುಟುಂಬಗಳು ಕೊಂದ ಪ್ರಾಣಿಯ ಮಾಂಸವನ್ನು ಹಂಚಿಕೊಂಡು ತಿನ್ನುವುದು ರೂಢಿ. ಅದನ್ನು ಒಣಗಿಸಿ ಅಥವಾ ಉಪ್ಪಿನಕಾಯಿಯಂತೆ ಬಹಳ ದಿನಗಳವರೆಗೆ ಬಳಸಬಹುದು .(ಇದು ತೀವ್ರ ಹಸಿವನ್ನು ತಡೆಯುತ್ತದೆ ಎಂಬ ಕಾರಣಕ್ಕೆ.)


ದನದ ಮಾಂಸದ ಬೆಲೆ ಏನು?

ದನದ ಮಾಂಸವು ಅತಿ ಕಡಿಮೆ ಬೆಲೆಯಲ್ಲಿ ದೊರಕುವ ಮಾಂಸಾಹಾರಿ ಆಹಾರ ಪದಾರ್ಥ ಗಳಲ್ಲಿ ಒಂದಾಗಿದೆ.


ಒಂದು ಕಿಲೊ ದನದ ಮಾಂಸದ ಬೆಲೆ ಇನ್ನೂರ ಐವತ್ತು ರೂಪಾಯಿಯಾದರೆ

ಕುರಿ ಮಾಂಸದ ಬೆಲೆ ಎಂಟು ನೂರು ರೂಪಾಯಿ ಇದೆ.


ದನದ ಮಾಂಸದಿಂದ ಯಾವ ಪೌಷ್ಟಿಕಾಂಶ ಪಡೆಯಲಾಗುತ್ತದೆ?

(ದನದ ಮಾಂಸದಲ್ಲಿರುವ ಪೋಷಕಾಂಶಗಳು)


  • ದನದ ಮಾಂಸದಲ್ಲಿ ಪ್ರೊಟೀನ್ ಅಂಶ - ನೂರು ಗ್ರಾಂ ದನದ ಮಾಂಸದಲ್ಲಿ ಸುಮಾರು ೨೬-೨೭ ಶೇಕಡಾ ಗುಣಮಟ್ಟದ ಪ್ರೊಟೀನ್ ಇರುತ್ತದೆ. ಅದರಲ್ಲಿ ಅಗತ್ಯವಿರುವ ಎಲ್ಲಾ ಒಂಬತ್ತು ಅಮೈನೋ ಆಸಿಡ್ ಕೂಡ ಇರುತ್ತದೆ. ಮಕ್ಕಳು, ಹದಿಹರೆಯದವರು, ಗರ್ಭಿಣಿ ಮತ್ತು ಹಾಲೂಡಿಸುವ ಮಹಿಳೆಯರಿಗೆ, ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ರೋಗಿಗಳಿಗೆ, ವೃದ್ಧರಿಗೆ ಮತ್ತು ಕಠಿಣ ಕೆಲಸದಲ್ಲಿತೊಡಗಿರುವವರಿಗೆ ಇದು ವಿಶೇಷವಾಗಿ ನೆರವಾಗುತ್ತದೆ. ದನದ ಮಾಂಸದಲ್ಲಿ ತುಂಬಾ ಉತ್ತಮ ಗುಣಮಟ್ಟದ ಪ್ರೊಟೀನ್ ಸಿಗುವುದರಿಂದ ಇದು ಸ್ನಾಯುವಿನ ಶಕ್ತಿ ಮತ್ತು ಗಾತ್ರವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ.

  • 100 ಗ್ರಾಂ ದನದ ಮಾಂಸದ ಪ್ರೋಟೀನ್‌ ದೈನಂದಿನ ಅಗತ್ಯಗಳಲ್ಲಿ ಐವತ್ತನಾಲ್ಕು ಪ್ರತಿಶತವನ್ನು ನೀಡುತ್ತದೆ. ಅಮೈನೋ ಆಸಿಡ್‌ಗಳು ಕಿಣ್ವಗಳು, ಹಿಮೋಗ್ಲೋಬಿನ್, ಕಾರ್ಟಿಲೆಜ್, ಅಸ್ಥಿರಜ್ಜುಗಳು, ಪ್ರತಿಕಾಯಗಳು, ಹಾರ್ಮೋನುಗಳು ಇತ್ಯಾದಿ ತಯಾರಿಸಲು ಇದು ಸಹಾಯ ಮಾಡುತ್ತದೆ.

  • ಸೋಯಾ ಹುರುಳಿಯಲ್ಲಿ ಸಾಕಷ್ಟು ಪ್ರೋಟೀನ್ ಇದ್ದರೂ ಸಹ ಕರುಳಿನಿಂದ ಅದನ್ನು ಹೀರಿಕೊಳ್ಳಲು ಸಾಧ್ಯವಿಲ್ಲ ಮತ್ತು ಅದನ್ನು ಜೀರ್ಣಿಸಿಕೊಳ್ಳುವುದು ಕಷ್ಟ.

  • ಕ್ಯಾಲ್ಸಿಯಂ ಮೂಳೆಗಳು ಮತ್ತು ಹಲ್ಲುಗಳ ಬೆಳವಣಿಗೆಗೆ ಕ್ಯಾಲ್ಸಿಯಂ ಬಹಳ ಮುಖ್ಯ. ಇದು ಸ್ನಾಯು ಮತ್ತು ಹೃದಯ ಚಟುವಟಿಕೆಗೆ ಸಹ ಮುಖ್ಯವಾಗಿದೆ. ಎಲೆ ತರಕಾರಿಗಳಲ್ಲಿ ಕ್ಯಾಲ್ಸಿಯಂ ಇರುತ್ತದೆ. ಆದರೆ ಅದನ್ನು ಕರುಳಿನಿಂದ ಹೀರಿಕೊಳ್ಳಲು ಕಷ್ಟ. ಸ್ವಲ್ಪ ಕ್ಯಾಲ್ಸಿಯಂ ಅನ್ನು ತಾಂಬೂಲ ಎಲೆಗಳು ಮತ್ತು ಸುಣ್ಣದಿಂದ ಪಡೆಯಬಹುದು

  • ವಿಟಮಿನ್ ಡಿ ಕೊರತೆಯಿಂದ ಕುಟಿಲ ವಾತ ((ರಿಕೆಟ್ಸ್) ಆಗುವ ಸಾಧ್ಯತೆಗಳಿವೆ. ವಯಸ್ಕರಲ್ಲಿ ಮೂಳೆಗಳು ಮೃದು ಮತ್ತು ದುರ್ಬಲವಾಗಬಹುದು. ಇದರಿಂದಾಗಿ ಮೂಳೆಗಳಲ್ಲಿ ನೋವು ಮತ್ತು ಮುರಿತಗಳು ಆಗುವ ಸಾಧ್ಯತೆಗಳಿವೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಕ್ವಾರಂಟೈನ್ ಅಥವಾ ಒಬ್ಬಂಟಿಯಾಗಿ ಇರಬೇಕಾಗಿ ಬಂದಾಗ ವಿಟಮಿನ್ ಡಿ ಕೊರತೆಯಿಂದಾಗಿ ತೊಂದರೆಗಳು ಹೆಚ್ಚು ಕಾಣಿಸಬಹುದು.

  • ಸತು -ದೇಹದ ಬೆಳವಣಿಗೆಗೆ ಸತುವು(zinc) ಬಹಳ ಮುಖ್ಯವಾದ ಅಂಶವಾಗಿದೆ. ಸತುವಿನ ಇರುವಿಕೆ ದೇಹದ ಬೆಳವಣಿಗೆ, ಸಂತಾನೋತ್ಪತ್ತಿ, ರೋಗ ನಿರೋಧಕ ಶಕ್ತಿ, ರುಚಿ, ವಾಸನೆ ಮತ್ತು ಗಾಯಗಳು ಗುಣವಾಗುವುದಕ್ಕೆ ಸಹಕಾರಿ ಆಗುತ್ತದೆ. ಒಂದು ಕಿಲೊ ದನದ ಮಾಂಸದಲ್ಲಿ 40 mg ಸತುವಿನ ಅಂಶ ಪಡೆಯಬಹುದು. ಹಸಿರು ತರಕಾರಿಗಳು ಮತ್ತು ಹಣ್ಣುಗಳಿಂದ ಹತ್ತು mg ಗಿಂತಲೂ ಕಡಿಮೆ ಸತು ಸಿಗುತ್ತದೆ.

  • ವಿಟಮಿನ್ ಎ -ರೋಗನಿರೋಧಕ ಶಕ್ತಿಗಾಗಿ, ದೃಷ್ಟಿಗೆ ಮತ್ತು ಸಂತಾನೋತ್ಪತ್ತಿ ಆರೋಗ್ಯಕ್ಕಾಗಿ ಎ ಜೀವಸತ್ವದ ಅಗತ್ಯವಿದೆ. ದನದ ಮಾಂಸದಿಂದ ಪಡೆಯುವ ವಿಟಮಿನ್ ಎ ಉತ್ತಮ ಗುಣಮಟ್ಟದ್ದಾಗಿದೆ. ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇಕಡಾ 67ರಷ್ಟು ಮಕ್ಕಳಲ್ಲಿ ವಿಟಮಿನ್ ಎ ಕೊರತೆ ನಮ್ಮದೇಶದಲ್ಲಿ ಕಂಡುಬಂದಿದೆ. ಅಸಮತೋಲನ ಆಹಾರ ಸೇವನೆ ಇದಕ್ಕೆ ಪ್ರಮುಖ ಕಾರಣ. ದನದ ಮಾಂಸದ ಯಕೃತ್ತಿನಲ್ಲಿ ನೈಸರ್ಗಿಕವಾಗಿ ಉತ್ತಮ ಗುಣಮಟ್ಟದ ವಿಟಮಿನ್ ಎ ಲಭ್ಯವಿದೆ.

  • ಕಬ್ಬಿಣ -ನಮ್ಮ ದೇಹ, ದನದ ಮಾಂಸದಲ್ಲಿ ಇರುವ ಕಬ್ಬಿಣಾಂಶವನ್ನು ಸಸ್ಯಾಹಾರಿ ಆಹಾರದಲ್ಲಿರುವ ಕಬ್ಬಿಣಾಂಶಕ್ಕಿಂತ ಉತ್ತಮವಾಗಿ ಹೀರಿಕೊಳ್ಳುತ್ತದೆ. ಸಸ್ಯಾಹಾರಿ ಆಹಾರಗಳಲ್ಲಿ ಕಬ್ಬಿಣಾಂಶ ಹೀರಿಕೊಳ್ಳುವಿಕೆಗಾಗಿ ಪ್ರತಿರೋಧಕಗಳು ಇವೆ. ಇದರಲ್ಲಿ ಫೈಟೇಟ್ಗಳಲ್ಲಿ, ಪಾಲಿಫಿನಾಲ್ಗಳು, ಕ್ಯಾಲ್ಸಿಯಂ ಮತ್ತು ಫಾಸ್ಫೇಟ್ಗಳನ್ನು ಸೇರಿಸಬಹುದು. ವಿಟಮಿನ್ ಎ ಜೊತೆಗೆ ವಿಟಮಿನ್ ಎ, ಬಿ 2, ಬಿ 6, ಬಿ 12. ಸಿ, ಇ, ಫೋಲೇಟ್, zinc ಮತ್ತು ಸೆಲೆನಿಯಮ್ ಅಗತ್ಯವಿದೆ. ಇವೆಲ್ಲ ದನದ ಮಾಂಸದಲ್ಲಿ ಇರುತ್ತವೆ. ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಬರೀ ಕಬ್ಬಿಣದ ಮಾತ್ರೆಗಳನ್ನು ನೀಡಿದರೆ ಸಾಕಾಗುವುದಿಲ್ಲ .

  • ರಕ್ತಹೀನತೆಯಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳಆಗಬಹುದು. ಹೆರಿಗೆ ಸಮಯದಲ್ಲಿ ಅತಿಯಾದ ರಕ್ತಸ್ರಾವ, ಅಕಾಲಿಕ ಜನನ ಆಗಬಹುದು. ಮಕ್ಕಳಲ್ಲಿ ರಕ್ತಹೀನತೆ ಇದ್ದರೆ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದು.

  • ವಿಟಮಿನ್ ಬಿ- 12 ಕೇವಲ ಮಾಂಸಾಹಾರಿ ಆಹಾರಗಳಲ್ಲಿ ಲಭ್ಯವಿದೆ. ಇದು ಮೆದುಳಿನ ಬೆಳವಣಿಗೆಗೆ ಒಂದು ಪ್ರಮುಖ ಅಂಶವಾಗಿದೆ. ಇದರ ಕೊರತೆ ಇದ್ದರೆ ಮಾನಸಿಕ ಆರೋಗ್ಯದ ಮೇಲೆ ಮತ್ತು ನರಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು.

  • ಕೊಬ್ಬಿನಾಂಶಗಳು -ಜೀವಕೋಶದ ಶಕ್ತಿಗಾಗಿ ಮತ್ತು ಹಾರ್ಮೋನುಗಳ ರಚನೆಗೆ ಕೊಬ್ಬಿನಾಮ್ಲಗಳು ಬೇಕಾಗುತ್ತವೆ. ಆಹಾರದ ಭಾಗವಾಗಿ ಕೊಬ್ಬಿನಾಮ್ಲಗಳು, ವಿಟಮಿನ್ ಎ, ಡಿ, ಇ ಮತ್ತು ಕೆ ಹೀರಿಕೊಳ್ಳುವಿಕೆಗಾಗಿ ಸಹಾಯ ಮಾಡುತ್ತದೆ. 100 ಗ್ರಾಂ ದನದ ಮಾಂಸದಿಂದ, 46 mg ಒಮೆಗಾ- 3 ಕೊಬ್ಬಿನಾಮ್ಲಗಳು ಮತ್ತು 401 mg ಒಮೆಗಾ- 6 ಕೊಬ್ಬಿನಾಮ್ಲಗಳು ಸಿಗುತ್ತದೆ.

  • ಪಿರಿಡಾಕ್ಸಿನ್ ಅಥವಾ ವಿಟಮಿನ್ ಬಿ 6 ಕೊಬ್ಬು, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ನ ಸ್ಥಗಿತಕ್ಕಾಗಿ ಬಹಳ ಅವಶ್ಯಕ. ಇದು ನರಪ್ರೇಕ್ಷಕ ಮತ್ತು ಹಿಮೋಗ್ಲೋಬಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ.

  • 100 ಗ್ರಾಂ ದನದ ಮಾಂಸದಿಂದ, ಸುಮಾರು 21ಶೇಕಡಾ ವಿಟಮಿನ್ ಬಿ 6 ಸಿಗುತ್ತದೆ

  • ರಿಬೋಫ್ಲಾವಿನ್ ಕೊರತೆಯಿಂದ ನಾಲಿಗೆ ಕೆಂಪು ಬಣ್ಣದ್ದಾಗಿ, ಉರಿತ ಉಂಟಾಗಬಹುದು. ಬಾಯಿಯ ಮೂಲೆಯಲ್ಲಿ ಬಿರುಕುಗಳು ಉಂಟಾಗಿ ರಕ್ತ ಒಸರಬಹುದು. ನೀವು ಸಿರಿಧಾನ್ಯಗಳಿಂದ ಉತ್ತಮ ಗುಣಮಟ್ಟದ ರೈಬೋಫ್ಲಾವಿನ್ ಪಡೆಯಲು ಕಷ್ಟ ಆಗಬಹುದು. ಪ್ರಾಣಿಗಳಿಂದ ಬರುವ ಆಹಾರವಿಲ್ಲದೆ ರಿಬೋಫ್ಲಾವಿನ್ ಪಡೆಯುವುದು ಕಷ್ಟ. 100 ಗ್ರಾಂ ದನದ ಮಾಂಸದಿಂದ, ಸುಮಾರು 10 - 15 ಶೇಕಡಾ ರೈಬೋಫ್ಲಾವಿನ್ ಸಿಗುತ್ತದೆ.

100 ಗ್ರಾಂ ಗೋಮಾಂಸದಿಂದ ಪಡೆಯಬಹುದಾದ ಪೋಷಣೆ

(USDA SR-21ಮೂಲ )


ಪೋಷಕಾಂಶಗಳು

ಗ್ರಾಂನಲ್ಲಿ

ದೈನಂದಿನ ಅವಶ್ಯಕತೆಯ ಶೇಕಡಾವಾರು

ಪ್ರೋಟೀನ್

27

54%

ರಿಬೋಫ್ಲಾವಿನ್

0.2 mg

10.6%

ನಿಯಾಸಿನ್

6 mg

29%

ವಿಟಮಿನ್ ಬಿ 6

ಪಿರಿಡಾಕ್ಸಿನ್

0.5 mg

21.2%

ವಿಟಮಿನ್ ಬಿ 12

2.8 mcg

48%

ರಂಜಕ

225 mg

22.4%

ಪೊಟ್ಯಾಸಿಯಮ್

380 mg

10.6%

ಸತು

6.4 mg

42.4%


Comentarios

Obtuvo 0 de 5 estrellas.
Aún no hay calificaciones

Agrega una calificación
bottom of page